ಪ್ರೇಮ ಯಾನ
ಅಹದ್ ಮಹಬ್ಬತ್ತಿನ ಮೀಮಲಿ ಮಿಂದೆದ್ದಾಗ ಅಹ್ಮದ್ ಹೊರಬಂದರು.ಪ್ರೀತಿ ಮೊಳಕೆಯೊಡೆದು ರಸಾಸ್ವದನೆಯಲಿ ತುಟಿ ಪರಸ್ಪರ ಮುತ್ತಿಟ್ಟು “ಮು” ಎಂದಿತು.
ಪ್ರಣಯಾವೇಶವೇರಿ ಆತ್ಮ ಆಕಾಶದಗಲ ಹಾರಾಡ ತೊಡಗಿದಾಗ ಅರಿಯದೆ ಬಂತು “ಹ “… ಎನುವ ಶಬ್ದ ತಡೆಯಲಾಗದ ಆನಂದ, ಉಕ್ಕುವ ಭಾವಾತಿರೇಕ, ಧುಮ್ಮಿಕ್ಕುವ ಪ್ರೇಮ ಮಧು ಹೀರಲು ಎರಡು ಮೀಮ್ ಗಳ ಸೇರಿಸಿ ಬಂತೊಂದು ರಾಗ ” ಮ್ಮ”..
ಅನಂತ ಅಲೌಕಿಕಾನುಭವದಿಂದ ಇಳೆಗೆ ಇಳಿಯಲು ಪ್ರಣಯಯಾನಕ್ಕೆ ತಾತ್ಕಾಲಿಕ ವಿರಾಮವೆಂಬಂತೆ ಮೊಳಗಿತು “ದ್”…
ಈ ಅಪ್ರತಿಮ ಪ್ರೇಮಯಾನವೇ “ಮುಹಮ್ಮದ್”….. ಸಲ್ಲಲಾಹು ಅಲೈಹಿವಸಲ್ಲಂ