ಶತಮಾನದ ಸುಧಾರಕ ಇಮಾಂ ಗಝ್ಝಾಲೀ (ರ.ಅ)
ಪ್ರವಾದಿಗಳ ಕಾಲಾನಂತರದಲ್ಲಿ ಪವಿತ್ರ ಇಸ್ಲಾಮಿನ ನೈಜ ತತ್ವಾದರ್ಶಗಳನ್ನು
ಜನಸಾಮಾನ್ಯರಿಗೆ ತಲುಪಿಸುವ ಮಹೋನ್ನತವಾದ ಹೊಣೆಯನ್ನು ಅಲ್ಲಾಹನು
ವಿದ್ವಾಂಸರಿಗೆ ನೀಡಿರುತ್ತಾನೆ.ಪ್ರತಿಯೊಂದು ಶತಮಾನದಲ್ಲೂ ಜಗತ್ತಿನೆಲ್ಲಡೆಗೆ ಜ್ಞಾನದ
ದಿವ್ಯ ಬೆಳಕನ್ನು ಹರಡಿ ಆಧ್ಯಾತ್ಮಿಕತೆಯ ಅನಂತವಾದ ಅನುಭೂತಿಯನ್ನು ಪಸರಿಸಿ ಆ
ಮೂಲಕ ಇಸ್ಲಾಮನ್ನು ಶಕ್ತಿ ಗೊಳಿಸುವ ಮಹಾವಿದ್ವಾಂಸರುಗಳನ್ನು ಅಲ್ಲಾಹನು
ಸಂದರ್ಭನುಸಾರವಾಗಿ ಕಳುಹಿಸುತ್ತಾನೆ. ಆ ಪೈಕಿ 5ನೇ ಶತಮಾನದ ಸುಧಾರಕರೂ
ಮಹಾವಿದ್ವಾಂಸರೂ ಆಗಿದ್ದರು ಬಹುಮಾನ್ಯರಾದ ಇಮಾಮ್ ಗಝ್ಝಾಲಿ ರವರು.
ಇಮಾಮ್ ಗಝ್ಝಾಲಿಯವರ ತಂದೆ ಕಂಬಳಿ ನೇಯ್ದು ಜೀವನ
ನಡೆಸುತ್ತಿದ್ದ ಅಹ್ಮದ್ ಎಂಬ ಸತ್ಪುರುಷರಾಗಿದ್ದರು. ಸದಾ ಸಜ್ಜನರೊಂದಿಗೆ ಅವರ
ಒಡನಾಟವಿಟ್ಟುಕೊಂಡಿದ್ದರು. ಅವರ ಉಪದೇಶ ನಿರ್ದೇಶನಗಳನ್ನು ಚಾಚೂತಪ್ಪದೇ
ತಮ್ಮ ಬದುಕಿನಲ್ಲಿ ಅಳವಡಿಸಿದ್ದ ಅವರು ನಿತ್ಯವೂ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಿದ್ದರು.
“ಅಲ್ಲಾಹನೇ ನನಗೆ ಪ್ರಚಂಡ ಭಾಷಣಕಾರರೂ ವಿಶ್ವೋತ್ತರ ವಿದ್ವಾಂಸರೂ ಆದ ಉತ್ತಮ
ಮಕ್ಕಳನ್ನು ನೀಡು”.
ಮಕ್ಕಳ ಭವಿಷ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದ ಅವರು ತಮ್ಮ
ಮರಣಾನಂತರ ಮಕ್ಕಳು ವಿದ್ಯಾಹೀನರಾಗಬಾರದು, ಮಹಾವಿದ್ವಾಂಸರುಗಳಾಗಿ
ಸಮುದಾಯದ ಮಾರ್ಗದರ್ಶಿಗಳಾಗಬೇಕೆಂಬುದಾಗಿ ಯೋಚಿಸುತ್ತಾ ತಮ್ಮ
ಆಪ್ತಮಿತ್ರರಾಗಿದ್ದ ಅಹ್ಮದ್ ಎಂಬ ಸೂಫೀ ವರ್ಯರಿಗೆ ತಮ್ಮಿಬ್ಬರು ಮಕ್ಕಳನ್ನು
ಒಪ್ಪಿಸುತ್ತಾ ವಸಿಯತ್ ಹೀಗೆ ಮಾಡುತ್ತಾರೆ. “ಕಳೆದ ಕಾಲದಲ್ಲಿ ಅರಿವಿನ
ಅನುಭೂತಿಯನ್ನು ಅನುಭವಿಸಲಾರದೇ ನಾನು ದುಃಖಿಸಿದ್ದೇನೆ. ಆದರೆ ಇದೀಗ
ನನ್ನಿಬ್ಬರು ಮಕ್ಕಳಾದರೂ ಆ ಅರಿವಿನ ಅದ್ಭುತವನ್ನು ಸಾಧಿಸಿ ಅನುಗ್ರಹಿತರಾಗಲಿ.
ಅದಕ್ಕಾಗಿ ನನ್ನೆಲ್ಲಾ ಸಂಪತ್ತನ್ನು ವ್ಯಯಿಸಿರಿ”. ಇದನ್ನು ಒಪ್ಪಿಕೊಂಡ ಆ ಸೂಫೀವರ್ಯರು
ಮಕ್ಕಳಿಬ್ಬರಿಗೂ ವಿದ್ಯಾಭ್ಯಾಸ ನೀಡಿದರು. ತಂದೆಯ ಅಭಿಲಾಷೆ ಈಡೇರಿತು. ಆದರೆ
ತಂದೆಯವರು ಬಿಟ್ಟುಹೋದ ಸಂಪತ್ತು ಬರಿದಾಗಲು ಹೆಚ್ಚುಕಾಲ ಹಿಡಿಯಲಿಲ್ಲ. ಆಗ
ಸೂಫೀವರ್ಯರು ಮಕ್ಕಳನ್ನು ಕರೆದು “ನಿಮ್ಮ ತಂದೆಯವರು ನನಗೆ ವಹಿಸಿದ
ಹೊಣೆಯನ್ನು ಪೂರ್ತಿಗೊಳಿಸಿದ್ದೇನೆ ಇನ್ನು ನಿಮ್ಮ ಭಾರವನ್ನು ವಹಿಸುವುದು ನನಗೆ
ಅಸಾಧ್ಯ. ಆದ್ದರಿಂದ ನೀವು ಯಾವುದಾದರು ದರ್ಸ್ ನಲ್ಲಿ ಸೇರಿಕೊಂಡು ವಿದ್ಯಾರ್ಜನೆ
ಮಾಡಿರಿ. ನಿಮ್ಮ ಜೀವನಕ್ಕೂ ಅದು ದಾರಿಯಾಗಬಹುದು”. ಎಂದರು. ಇದನ್ನು ಒಪ್ಪಿದ
ಸಹೋದರರಿಗೆ ಅನಂತರದಲ್ಲಿ ಸುಜ್ಞಾನ ಸಾಧನೆಯೇ ಸುಪ್ರಧಾನ ಗುರಿಯಾಗಿ
ಮಾರ್ಪಟ್ಟಿತು.
ಇಮಾಮ್ ರವರು ತಮ್ಮ ಹುಟ್ಟೂರಲ್ಲಿ ಅಹಮದ್ ಬ್ನು ಮಹಮ್ಮದ್
ರಾದ್ಖಾನಿ ಎಂಬವರಿಂದ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ಜೋರ್ಡನಿಗೆ
ತೆರಳಿ,ಅಲ್ಲಿಂದ ಪಂಡಿತ ಶ್ರೇಷ್ಠರಾಗಿದ್ದ ಅಬೂನಸ್ರ್ ಇಸ್ಮಾಯಿಲ್ ರವರಿಂದ ಕಲಿತರು.
ಅವರಿಂದ ಆಲಿಸಿದ ಸರ್ವ ವಿಷಯಗಳನ್ನು ಕಾಗದದ ತುಂಡುಗಳಲ್ಲಿ
ಸುರಕ್ಷಿತವಾಗಿಟ್ಟಿದ್ದರು. ಅವರೊಮ್ಮೆ ರಜಾ ಕಾಲದಲ್ಲಿ ಊರಿಗೆ ಮರಳುತ್ತಿದ್ದ ಸಮಯದಲ್ಲಿ
ದಾರಿ ಮಧ್ಯೆ ದರೋಡೆಕೋರರ ಸಂಘವೊಂದು ಅವರನ್ನು ತಡೆದು ನಿಲ್ಲಿಸಿ, ಅವರ ಬಳಿ
ಇದ್ದ ಎಲ್ಲವನ್ನು ದೋಚಿದರು. ಆಗ ಇಮಾಮ್ ರವರು ವಿನಂತಿಸಿದರು “ನೀವು
ಯಾವುದನ್ನು ಬೇಕಾದರೂ ತೆಗೆದುಕೊಳ್ಳಿರಿ ಆದರೆ ನಾನು ಬಹಳ ಕಷ್ಟಪಟ್ಟು ಕಲಿತು
ಕ್ರೂಢೀಕರಿಸಿದ ಜ್ಞಾನವನ್ನು ಈ ಕಾಗದದ ತುಂಡುಗಳಲ್ಲಿ ಬರೆದಿಟ್ಟಿದ್ದೇನೆ. ಅದು ನಿಮಗೆ
B
ಮತ್ತಷ್ಟು ಹರಡಿ ಜನ ಪ್ರವಾಹವೇ ಹರಿಯತೊಡಗಿತು. ಅದೆಷ್ಟೋ ಮಹೋನ್ನತ
ವಿದ್ವಾಂಸರು ಮಹಾನರಿಂದ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಿದ್ದರು.
ಅವರು ರಚಿಸಿದ ಗ್ರಂಥಗಳನ್ನು ಅವರ ಆಯುಷ್ಯದ ಪ್ರತಿ ದಿನಗಳಿಗೆ
ವಿಂಗಡಿಸುವುದಾದರೆ ಸರಾಸರಿ ದಿನಕ್ಕೆ 16 ಪುಟಗಳಂತೆ ಬರೆದಿದ್ದು ಅದನ್ನು ವಿವರಿಸಲು
ಒಂದು ಪುರುಷಾಯುಸ್ಸು ಬೇಕಾದೀತು ಎಂದು ಇಮಾಮ್ ನವವಿ ರವರು
ಅಭಿಪ್ರಾಯಪಡುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ಗ್ರಂಥ ರಚನೆಯನ್ನಾರಂಭಿಸಿದ
ಅವರು ಕೇವಲ 35 ವರ್ಷಗಳಲ್ಲಿ 457 ಬೃಹತ್ ಗ್ರಂಥಗಳನ್ನು ರಚಿಸಿದ್ದಾರೆ. ಅರಬ್
ಸಾಹಿತ್ಯದಲ್ಲಿ ಅತ್ಯಾಕರ್ಷಕ ಶೈಲಿಯನ್ನು ಅಳವಡಿಸಿಕೊಂಡು ಇಸ್ಲಾಮೀ ಸಾಹಿತ್ಯಕ್ಕೆ
ನವಶೈಲಿಯನ್ನು ಮೂಡಿಸುತ್ತಾ ಸರ್ವ ವಿಷಯಗಳಲ್ಲೂ ಅನೇಕಾರು ಗ್ರಂಥಗಳನ್ನು ರಚಿಸಿ
ಸಯ್ಯಿದುಲ್ ಮುಸನ್ನಿಫೀನ್ “ಗ್ರಂಥಕರ್ತರ ನೇತಾರ” ಎಂಬ ಪ್ರಸಿದ್ಧಿಯನ್ನು ಪಡೆದರು.
ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಮಹಾನುಭಾವರು ಕೈಯಾಡಿಸದ
ಯಾವುದೇ ಜ್ಞಾನ ಶಾಖೆಗಳಿರಲಿಲ್ಲ. ಕರ್ಮ ಶಾಸ್ತ್ರದಿಂದ ಹಿಡಿದು ಆಧುನಿಕ ಫೀಲಾಸಫಿ (
ತತ್ವಶಾಸ್ತ್ರ )ಗೂ ಕೂಡ ಅವರ ಗ್ರಂಥಗಳು ಇಂದಿಗೂ ಆಧಾರವಾಗಿದೆ.
ವೈಜ್ಞಾನಿಕ,ದಾರ್ಶನಿಕ,ಆಧ್ಯಾತ್ಮಿಕ ನಭೋ ಮಂಡಲದಲ್ಲಿ
ಅನಿರ್ವಚನೀಯ ಅನುಭೂತಿಯನ್ನು ನೀಡಿ ಧರ್ಮ ಸೇವನೆಯಿಂದ ಧನ್ಯಗೊಂಡ ಆ
ಜೀವನ ಹಿಜರಿ 505 ರಬೀವುಲ್ ಅವ್ವಲ್ 14 ಸೋಮವಾರದಂದು ಕೊನೆಗಂಡಿತು.
ಸಹೋದರ ಅಹಮದ್ ರವರು ವಿವರಿಸುತ್ತಾರೆ “ನನ್ನ ಸಹೋದರ ಸೋಮವಾರ
ನಸುಕಿನಲ್ಲಿ ವುಳೂ ಮಾಡಿ ನಮಾಜ್ ನಿರ್ವಹಿಸಿದರು. ರಾಜ ಸನ್ನಿಧಿಗೆ ಬರಲು
ಸಿದ್ಧಗೊಂಡಿದ್ದೇನೆ ಎನ್ನುತ್ತಾ ಪಾದವನ್ನು ಚಾಚಿ ಅಂತ್ಯಶ್ವಾಸವನ್ನೆಳೆದರು…”.
ಮುಹಮ್ಮದ್ ಶಫೀಕ್
(ಅಲ್ ಇಹ್ಸಾನ್ ದಅವಾ ಕಾಲೇಜು, ಮೂಳೂರು)